ಉಪಗ್ರಹ: ಒಂದು ಗ್ರಹದ ಸುತ್ತಲೂ ಪರಿಭ್ರಮಿಸುವ ಆಕಾಶಕಾಯ (ಸ್ಯಾಟೆಲ್ಲೈಟ್). ಚಂದ್ರಭೂಮಿಯ ಉಪಗ್ರಹ. ಚಂದ್ರನು ಆದ್ದರಿಂದ ಚಂದ್ರ, ಉಪಗ್ರಹ ಶಬ್ದಗಳನ್ನು ಪರ್ಯಾಯಾರ್ಥದಲ್ಲಿ ಬಳಸುವುದುಂಟು. ಸೌರವ್ಯೂಹದಲ್ಲಿ ೩೨ ಉಪಗ್ರಹಗಳಿವೆ. ಅವುಗಳ ಕೆಲವು ವಿವರಗಳನ್ನು ಇಲ್ಲಿ ಕೊಟ್ಟಿದೆ.
ಉಪಗ್ರಹ-ಮೂಲಗ್ರಹ ವ್ಯವಸ್ಥೆಯ ಗುರುತ್ವಕೇಂದ್ರ ಸೂರ್ಯನ ಸುತ್ತಲೂ ಪರಿಭ್ರಮಿಸು ವುದು. ಉಪಗ್ರಹದೊಡನೆ ಹೋಲಿಸುವಾಗ ಮೂಲಗ್ರಹ ಬಲು ದೊಡ್ಡದಾಗಿರುವುದರಿಂದ ಎಲ್ಲ ಸಾಮಾನ್ಯ ಹೇಳಿಕೆಗಳಲ್ಲಿಯೂ ಈ ಗುರುತ್ವಕೇಂದ್ರದ ಕಕ್ಷೆಯನ್ನೇ ಆ ಗ್ರಹದ ಕಕ್ಷೆಯೆಂದು ಭಾವಿಸುವುದು ವಾಡಿಕೆ. 
ಒಂದೊಂದು ಉಪಗ್ರಹದ ವಿವರ ತಿಳಿಯಲು ಆಯಾ ಮೂಲಗ್ರಹದ ವಿವರ ನೋಡಿ. ಈ ನೈಸರ್ಗಿಕ ಉಪಗ್ರಹಗಳಲ್ಲದೇ ಅಂತರಿಕ್ಷ ಸಂಶೋಧನೆಯಲ್ಲಿ ಮಾನವ ಬಿಟ್ಟಿರುವ ಕೃತಕ ಉಪಗ್ರಹಗಳಿಗೆ ನೋಡಿ ಉಪಗ್ರಹ, -ಕೃತಕ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ